ಕಿಪ್ಲಿಂಗ್, ಜೋಸೆಫ್ ರಡ್‍ಯಾರ್ಡ್

 1865-1936. ಆಂಗ್ಲ ಕಾದಂಬರಿಕಾರ, ಕಥೆಗಾರ, ಕವಿ, ತಂದೆ ಜಾನ್ ಲಾಕ್‍ವುಡ್ ಕಿಪ್ಲಿಂಗ್ ಬೊಂಬಾಯಿ ವಿಶ್ವವಿದ್ಯಾಲಯದಲ್ಲಿ ಶಿಲ್ಪಶಾಸ್ತ್ರದ ಪ್ರಾಧ್ಯಾಪಕನಾಗಿದ್ದಾಗ ಹುಟ್ಟಿದ ಕಿಪ್ಲಿಂಗ್ ವೆಸ್ಟ್‍ವರ್ಡ್ ಹೋನ ಯುನೈಟೆಟ್ ಸರ್ವಿಸಸ್ ಕಾಲೇಜಿನಲ್ಲಿ ಓದಿದ. ಆರನೆಯ ವಯಸ್ಸಿನಲ್ಲಿ ತನ್ನ ಸಹೋದರಿಯೊಂದಿಗೆ ಇಂಗ್ಲೆಂಡಿಗೆ ಹೋದ. ಈತ ಅಲ್ಲಿ ನಿರ್ದಯಿ ಹೆಂಗಸೊಬ್ಬಳ ಆಶ್ರಯದಲ್ಲಿ 6 ವರ್ಷ ಕಳೆದ. ಆ ದಾರುಣ ಮಯದಿನಗಳನ್ನು ತನ್ನ ಬಾ ಬಾ ಬ್ಲಾಕ್ ಷೀಪ್ ಕಥೆಯಲ್ಲಿ ಚಿತ್ರಿಸಿದ್ದಾನೆ. ತನ್ನ 17ನೆಯ ವಯಸ್ಸಿನಲ್ಲಿ (1882) ಭಾರತಕ್ಕೆ ಹಿಂತಿರುಗಿ ಲಾಹೋರಿನ ಸಿವಿಲ್ ಮತ್ತು ಮಿಲಿಟರಿ ಗೆeóÉಟ್ಟಿನ ಸಂಪಾದಕನಾದ. ಅಲ್ಲಿಯ ಸ್ಥಳೀಯ ವಸ್ತು ಸಂಗ್ರಹಾಲಯದಲ್ಲಿ ಈತನ ತಂದೆ ಕ್ಯುರೇಟರ್ ಹುದ್ದೆಯಲ್ಲಿದ್ದ ಏಳೂವರೆ ವರ್ಷಗಳ ಕಾಲ ಆಂಗ್ಲೊ ಇಂಡಿಯನ್ ಪತ್ರಿಕೆಯೊಂದಕ್ಕೆ ಖಾಲಿ ಬಿದ್ದ ಸ್ಥಳ ತುಂಬಿಸಲು ಬರೆದ ಕವಿತೆಗಳು ಮತ್ತು ಸಣ್ಣ ಕಥೆಗಳಿಂದಾಗಿ ಈತ ಪ್ರಸಿದ್ಧಿ ಪಡೆದ. ಡಿಪಾರ್ಟ್‍ಮೆಂಟಲ್ ಡಿಟೀಸು (1886) ಈತನ ಪ್ರಥಮ ವಿಡಂಬನ ಗೀತೆಗಳ ಸಂಕಲನ. 1887-89 ರ ಅವಧಿಯಲ್ಲಿ ಕಿಪ್ಲಿಂಗ್ ಸುಮಾರು 70 ಕಥೆಗಳನ್ನು ಬರೆದು ಪ್ರಕಟಿಸಿದ. ಅವೆಲ್ಲ ಪತ್ರಿಕೆಗಾಗಿ ಬರೆದವು. ಪ್ಲೆಯ್‍ನ್ ಟೇಲ್ಸ್ ಫ್ರಂ ದಿ ಹಿಲ್ಸ್, ಸೋಲ್ಜರ್ಸ್ ತ್ರಿ, ದಿ ಸ್ಟೋರಿ ಆಫ್ ದ ಗ್ಯಾಡ್ಸ್‍ಬೀಸ್, ಇನ್ ಬ್ಲ್ಯಾಕ್ ಅಂಡ್ ವೈಟ್, ಅಂಡರ್ ದಿ ದೇವದಾರ್ಸ್, ದಿ ಫಾಂಟಮ್ ರಿಕ್ಷಾ. ವಿ ವಿಲ್ಲಿ ವಿಂಕಿ-ಈ ಗ್ರಂಥಗಳಲ್ಲಿ ಈತನ ಕಥೆಗಳು ಅಡಕವಾಗಿವೆ. 1889ರಲ್ಲಿ ಇಂಗ್ಲೆಂಡಿಗೆ ತೆರಳುವಾಗ ಜಪಾನ್ ಮತ್ತು ಅಮೆರಿಕದಲ್ಲಿ ಸ್ವಲ್ಪಕಾಲ ತಂಗಿದ್ದ. ಅಲ್ಲಿಯ ವಿಚಾರಗಳನ್ನು ದಿ ಲೈಟ್ ದಟ್ ಫೆಯ್‍ಲ್ಡ್ (1891) ಕಾದಂಬರಿಯಲ್ಲಿ ಕಾಣಬಹುದು. ಇದೇ ಸಮಯದಲ್ಲಿ ಹೊರ ಎರಡು ಕಥಾಸಂಕಲನಗಳಲ್ಲಿ ಅತ್ಯುತ್ತಮ ಕಥೆಗಳು ಅಡಗಿದೆ. 1892ರಲ್ಲಿ ಆಸ್ಟ್ರೇಲಿಯ, ನ್ಯೂಜಿûಲೆಂಡ್‍ಗಳನ್ನು ಸುತ್ತಿ ಕ್ಯಾರೊಲಿನ್ ಸ್ಟಾರ್ ಬ್ಯಾಲೆಸ್ಟಿಯರ್ ಎಂಬ ಅಮೆರಿಕದ ಮಹಿಳೆಯನ್ನು ಮದುವೆಯಾಗಿ ಆಕೆಯ ಸಂಬಂಧಿಕರೊಡನೆ ಅಮೆರಿಕದಲ್ಲೇ ನೆಲಸಿದ. ನಾಲ್ಕು ವರ್ಷಗಳ ಅನಂತರ ಇಂಗ್ಲೆಂಡಿಗೆ ಹಿಂದಿರುಗಿದ. ಅಮೆರಿಕದಲ್ಲಿದ್ದಾಗ ಪ್ರಾಣಿಗಳ ಕಥೆಗಳೆನಿಸಿದ ಜಂಗಲ್ ಬುಕ್ (1894-95) ಎಂಬ ಎರಡು ಪುಸ್ತಕಗಳನ್ನೂ ಬೆಸ್ತನ ಜೀವನವೊಂದನ್ನು ಚಿತ್ರಿಸುವ ಕಾಪ್ಟನ್ಸ್ ಕರೇಜಿಯಸ್ (1897) ಎಂಬ ಕಥೆಯನ್ನು ಬ್ರಿಟಿಷ್ ಚಕ್ರಾಧಿಪತ್ಯದ ಹೆಚ್ಚಳ ಕುರಿತ ಬ್ಯಾರಕ್ ರೂಂ ಬ್ಯಾಲಡ್ಸ್ (1892) ಮತ್ತು ದಿ ಸೆವನ್ ಸೀಸ್ (1896) ಎಂಬ ಪದ್ಯಗಳನ್ನೂ ಬರೆದ. 1895ರಲ್ಲಿ ಆಸ್ಥಾನ ಕವಿ ಯಾಗಾನಾ ಆಹ್ವಾನವನ್ನು ತಿರಸ್ಕರಿಸಿದ. ಸ್ಥಾನದ ಸಂಕೋಲೆಯಿಂದ ಬಂಧಿತನಾಗಿ ಮಾಡುವ ಸಾಹಿತ್ಯ ಸೇವೆಗಿಂತ ಸ್ವತಂತ್ರವಾಗಿದ್ದುಕೊಂಡು ಹೆಚ್ಚು ಸೇವೆ ಮಾಡಬಹುದೆಂದು ಅವನಿಗೆ ತೋರಿತು.

 ದಿ ಡೇಸ್ ವರ್ಕ್ (1898) ಎಂಬ ಕಥಾಸಂಕಲನದಲ್ಲಿ ಉತ್ತಮ ಕಥೆಗಳಿವೆ. ಕಿಮ್ (1601) ಇಂಡಿಯಾದಲ್ಲಿನ ಕವಿಯ ಬಾಲ್ಯ ಜೀವನವನ್ನು ಚಿತ್ರಿಸುವ ಕಾದಂಬರಿ ಜಸ್ಟ್ ಸೊ ಸ್ಟೋರಿಸ್ ಫಾರ್ ಚಿಲ್ಡ್ರನ್, ಪಕ್ ಆಫ್ ಪುಕ್ಸ್‍ಹಿಲ್ (1906); ರಿವಾಡ್ರ್ಸ್ ಅಂಡ್ ಫೇರಿಸ್ (1910)-ಇವು ಈತನ ಇತರ ಪುಸ್ತಕಗಳು, ತನ್ನ ಇಳಿವಯಸ್ಸಿನಲ್ಲಿ ಎ ಡೈವರ್ಸಿಟಿ ಆಫ್ ಕ್ರೀಚರ್ಸ್ (1917); ಡೆಬಿಟ್ಸ್ ಅಂಡ್ ಕ್ರೆಡಿಟ್ಸ್ (1926); ಲಿವಿಟ್ಸ್ ಅಂಡ್ ರಿನ್ಯೂಯಲ್ಸ್ (1932) ಗ್ರಂಥಗಳನ್ನು ಬರೆದ. ಮೊದಲ ಮಹಾಯುದ್ಧದಲ್ಲಿ ತನ್ನ ಒಬ್ಬನೇ ಮಗ ಸಾವನ್ನಪ್ಪಲು ದಿ ಐರಿಷ್ ಗಾಡ್ರ್ಸ್ ಇನ್ ದಿ ಗ್ರೇಟ್ ವಾರ್ (1923) ಎಂಬ ಗ್ರಂಥವನ್ನು ಬರೆದ. 1907ರಲ್ಲಿ ಕಿಪ್ಲಿಂಗ್‍ಗೆ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ದೊರಕಿತು. ಹಿಂದೆ ಪೊಯಟ್ ಲಾರಿಯೆಟ್ ಪದವಿಯನ್ನು ತಿರಸ್ಕರಿಸಿದಂತೆ ಮೂರು ಬಾರಿ ನೀಡಿದ ಆರ್ಡ್‍ರ್ ಆಫ್ ಮೆರಿಟ್ ಪ್ರಶಸ್ತಿಯನ್ನೂ ಕಿಪ್ಲಿಂಗ್ ತಿರಸ್ಕಿರಿಸಿದ. 1926ರಲ್ಲಿ ರಾಯಲ್ ಸೊಸೈಟಿ ಆಫ್ ಲಿಟರೇಚರಿನ ಚಿನ್ನದ ಪದಕ ಪಡೆದ. ಆಕ್ಸ್‍ಫರ್ಡ್, ಕೇಂಬ್ರಿಜ್, ಎಡಿನ್ಬರೊ, ಡಹ್ರ್ಯಾಂ, ಪ್ಯಾರಿಸ್, ಸ್ಟ್ರಾಸ್‍ಬರ್ಗ್, ಅಥೆನ್ಸ್, ಮೆಗ್ಗಿಲ್ ವಿಶ್ವವಿದ್ಯಾಲಯಗಳು ಈತನಿಗೆ ಗೌರವ ಡಾಕ್ಟರೇಟುಗಳನ್ನು ನೀಡಿದುವು. ಮರಣಾಂತರ ಈತನ ದೇಹವನ್ನು ವೆಸ್ಟ್ ಮಿನ್ಸ್‍ಟರ್ ಅಬೆಯಲ್ಲಿ ಸಮಾಧಿ ಮಾಡಲಾಯಿತು. ಸಣ್ಣ ಕಥೆಗಳ ರಚನೆಯಲ್ಲಿ ಕಿಪ್ಲಿಂಗ್ ಅದ್ವಿತೀಯ, ನಿಸ್ಸೀವi. ಈತನ ಕವನಗಳ ವಿಚಾರವಾಗಿ ವಿರ್ಮಶಕರಲ್ಲಿ ಭಿನ್ನಾಭಿಪ್ರಾಯವಿದೆ. ಆಡುನುಡಿಗಳ ಔಚಿತ್ಯಪೂರ್ಣ ಬಳಕೆ, ಮನಮೋಹಕವಾದ ವರ್ಣನೆ, ಸ್ಥೈರ್ಯ, ದೇಶಪ್ರೇಮವನ್ನು ಉಕ್ಕಿಸುವ ಸನ್ನಿವೇಶಗಳನ್ನು ತರುವುದು,-ಇವು ಈತನ ಬರವಣಿಗೆಯ ಕೆಲವು ವೈಶಿಷ್ಟ್ಯಗಳು, ಬ್ರಿಟಿಷ್ ರಾಷ್ಟ್ರದ ಜನತೆಯ ಮೇಲ್ಮೆಯಲ್ಲಿ ಕಿಪ್ಲಿಂಗನಿಗೆ ಅಪಾರ ಗೌರವ, ನಂಬಿಕೆಗಳಿದ್ದು ಅವನ ಸಾಹಿತ್ಯ ಸೃಷ್ಟಿ ರಾಜಕೀಯದಿಂದ ಪ್ರಭಾವಿತವಾಗಿದೆ.          (ಎಚ್.ವಿ.ಎಸ್.; ಎನ್.ಎಸ್.ಎಲ್.)

 ಕಿಪ್ಲಿಂಗ್‍ನದು ಅಸಾಧಾರಣ ಜನಪ್ರಿಯತೆ. ಸಾಮಾನ್ಯ ಬ್ರಿಟಿಷ್ ಸಿಪಾಯಿಯ ಚೈತನ್ಯಪೂರ್ಣ ಅಶಿಷ್ಟ ಭಾಷೆಯಲ್ಲಿನ ಕವನಗಳನ್ನು ಸಾಮಾನ್ಯವಾಗಿ ಕಾವ್ಯದಿಂದ ದೂರ ಇರುವವರೂ ಓದಿದರು. ಇಷ್ಟಪಟ್ಟರು. ಇವನ ತೀವ್ರ ದೇಶಾಭಿಮಾನ ಮತ್ತು ಸಾಮ್ರಾಜ್ಯಶಾಹಿ ಧೋರಣೆಗಳು ಆ ಕಾಲದ ಓದುಗರಿಗೆ ಪ್ರಿಯವಾದವು. ಆದರೆ ಅನಂತರ ಪೀಳಿಗೆಗಳು ಇವನಿಂದ ದೂರವಾದವು. 1910ರ ಹೊತ್ತಿಗೆ, ಬೋಯದ್ ಯುದ್ಧವನ್ನು ಬ್ರಿಟನ್ ಸರಿಯಾಗಿ ನಿರ್ವಹಿಸದೆ, ಜನರ ಸಾಮ್ರಾಜ್ಯಶಾಹಿ ಉತ್ಸಾಹಕ್ಕೆ ಕುಂದುಬಂದಿತು. ಪ್ರಜಾಪ್ರಭುತ್ವವನ್ನು ಮಹಿಳೆಯರಿಗೆ ಮತದಾನ ಹಕ್ಕನ್ನು ಕೊಡುವುದನ್ನು ವಿರೋಧಿಸಿದ.

ಇವನ ಪ್ರಸಿದ್ಧ ಕಾದಂಬರಿ `ಕಿಮ್' ಭಾರತದಲ್ಲಿ ಬೆಳೆಯುತ್ತಿದ್ದ ಐರಿಷ್ ಹುಡುಗನ ಕಥೆಯನ್ನು ಹೇಳುತ್ತದೆ. ಕಿಮ್ ಬ್ರಿಟಿಷ್ ಗುಪ್ತಜನರ ದಳದಲ್ಲಿಯೂ ಕೆಲಸ ಮಾಡುತ್ತಾನೆ. ಒಬ್ಬ ಲಾಮಾನಾ ಅನುಚರನೂ ಆಗಿದ್ದಾನೆ. ಈ ಕಾದಂಬರಿಯನ್ನು ಕ್ಲಿಪ್ಪಿಂಗ್ ಬರೆಯುವ ಹೊತ್ತಿಗೆ (1901) ಭಾರತದಲ್ಲಿ ರಾಷ್ಟ್ರಾಭಿಮಾನದ ಅಲೆಗಳು ಎದ್ದಿದ್ದರೂ ಕಾದಂಬರಿಯಲ್ಲಿ ಇದರ ಸೂಚನೆಯೂ ಇಲ್ಲ, ಬಿಳಿ ಮನುಷ್ಯ ಭಾರತೀಯರ ಪ್ರೀತಿಯ ಧಣಿ `ದ ವೈಟ್ ಮ್ಯಾನ್ಸ್ ಬರ್ಡನ್' ಎನ್ನುವುದು ಕ್ಲಿಪ್ಪಿಂಗ್‍ನಿಗೆ ಪ್ರಿಯವಾದ ಪದ ಸಮೂಹ; ಇದರ ಅರ್ಥ, ಬಿಳಿಯರಲ್ಲಿದ್ದವರನ್ನು ನಾಗರಿಕರನ್ನಾಗಿ ಮಾಡುವ ಹೊಣೆಯನ್ನು ದೈವವೇ ಬಿಳಿಯನಿಗೆ ವಿಧಿಸಿದೆ ಎಂದು ಕಾದಂಬರಿಯು ಅಂದಿನ ಭಾರತೀಯರ ಚಿತ್ರಗಳಿಗಾಗಿ ಇಂದೂ ಓದಬೇಕಾದದ್ದು, ಬಹು ಶಕ್ತಿ ಬರಹ ಇವನದು.

 

(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ